ಕೋಟೆ ಬೆಟ್ಟ ಕೊಡಗು
ಅವಲೋಕನ ಕೋಟೆ ಬೆಟ್ಟ ಕೊಡಗಿನ ಮೂರನೇ ಎತ್ತರದ ಬೆಟ್ಟ. ಸಮುದ್ರ ಮಟ್ಟದಿಂದ 5314 ಅಡಿ ಅಥವಾ 1620ಮೀ. ಎತ್ತರವಿರುವ ಈ ಬೆಟ್ಟ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಪಟ್ಟಣದ ಗರ್ವಾಲೆ ಎಂಬ ಜಾಗದಲ್ಲಿದೆ. 29 ಕಿ. ಮೀ. ಪ್ರಯಾಣವನ್ನು ಸೋಮವಾರಪೇಟೆ ಪಟ್ಟಣದಿಂದ ಕೋಟೆಬೆಟ್ಟಕ್ಕೆ ಮಾಡಬೇಕು. ಸರ್ಕಾರಿ ಮತ್ತು ಖಾಸಗಿ ಬಸ್ಸು ವ್ಯವಸ್ಥೆ ಇಲ್ಲಿಯವರೆಗಿಲ್ಲ. ದಿನಕ್ಕೆ ಒಂದೆರಡು ಬಸ್ಸುಗಳು ಗರ್ವಾಲೆ ಗ್ರಾಮದವರೆಗಿದ್ದು ಅಲ್ಲಿಂದ ಶಿರಂಗಳ್ಳಿ ಮಾರ್ಗವಾಗಿ 5.7 ಕಿ.ಮಿ. ದೂರವನ್ನು ಕಾಲ್ನಡಿಗೆ ಇಲ್ಲವೇ ಖಾಸಗಿ ವಾಹನಗಳ ಮೂಲಕ ಪ್ರಯಾಣಿಸಬೇಕಾಗುತ್ತದೆ ದೇವಸ್ಥಾನಗಳು ಈ ಕೋಟೆಬೆಟ್ಟದಲ್ಲಿ ಎರಡು ದೇವಸ್ಥಾನಗಳಿವೆ. ಕೋಟೆಶ್ವರ ಮತ್ತು ಬೊಟ್ಲಪ್ಪ ಎಂಬ ಎರಡು ಹೆಸರಿನಿಂದ ಇಲ್ಲಿನ ಈಶ್ವರ ದೇವರನ್ನು ಕೊಡವ ಸ್ಥಳೀಯರು ಕರೆಯುತ್ತಾರೆ. ಈ ದೇವಾಲಯದ ಎದುರು ಬಸವನ ವಿಗ್ರಹವಿದೆ. ಇಲ್ಲಿ ಕೆಲವು ಅಡಿ ಜಾಗಗಳ ಅಂತರದಲ್ಲಿ ಸುಣ್ಣ ಬಣ್ಣ ಮಾಡಿರುವ ಎರಡು ಚಿಕ್ಕ ಚಿಕ್ಕ ಕೊಳಗಳಿವೆ. ಒಂದು ಕೊಳದ ನೀರನ್ನು ಕುಡಿಯಲು ಮತ್ತು ಹಬ್ಬ ಹರಿದಿನಗಳ ಆಚರಣೆಗೆಂದು ಬಳಸಲಾಗುತ್ತದೆ. ಮತ್ತೊಂದು ಕೊಳದ ನೀರನ್ನು ಪ್ರಾಣಿಗಳಿಗೆ ಮೀಸಲಾಗಿಡಲಾಗಿದೆ. ವರ್ಷ ಪೂರ್ತಿ ಈ ಕೊಳಗಳಲ್ಲಿ ನೀರು ತುಂಬಿರ...